ಡಿಸೆಂಬರ್ ೧ - ಡಿಸೆಂಬರ್ ತಿಂಗಳಿನ ಮೊದಲನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೫ನೇ(ಅಧಿಕ ವರ್ಷದಲ್ಲಿ ೩೩೬ನೇ ದಿನ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೬೪೦ - ಪೋರ್ಚುಗಲ್ ಸ್ಪೇನ್ ಇಂದ ಸ್ವಾತಂತ್ರ್ಯ ಪಡೆದು ನಾಲ್ಕನೇ ಜೊಆಒ ಅದರ ರಾಜನಾದನು. ೧೮೨೧ - ಕೋಸ್ಟಾ ರಿಕದ ಮೊದಲ ಸಂವಿಧಾನ ಜಾರಿಗೆ ಬಂದಿತು. ೧೯೫೮ - ಮಧ್ಯ ಆಫ್ರಿಕಾ ಗಣರಾಜ್ಯವು ಫ್ರಾನ್ಸ್ ಇಂದ ಸ್ವಾತಂತ್ರ್ಯ ಪಡೆಯಿತು. ೧೯೬೩ - ನಾಗಾಲ್ಯಾಂಡ್ ಭಾರತದ ೧೬ನೇ ರಾಜ್ಯವಾಯಿತು. ೧೯೬೫ - ಭಾರತದ ಗಡಿ ರಕ್ಷಣಾ ಪಡೆ ಸ್ಥಾಪನೆ. ೧೯೮೨ - ಅಮೇರಿಕ ದೇಶದ ಯುಟಾದಲ್ಲಿ ವಿಶ್ವದ ಪ್ರಥಮ ಕೃತಕ ಹೃದಯ ಯಶಸ್ವಿಯಾಗಿ ಅಳವಡಿಸಲಾಯಿತು. ೧೯೮೮ - ಬೆನಾಜೀರ್ ಭುಟ್ಟೊ ಪಾಕಿಸ್ತಾನದ ಪ್ರಧಾನಮಂತ್ರಿಯಾದಳು. ೧೯೯೮ - ಪ್ರಪಂಚದ ಅತ್ಯಂತ ದೊಡ್ಡ ಉದ್ಯಮವಾದ ಎಕ್ಸೊನ್-ಮೊಬಿಲ್ ಸಂಘಟನೆಯಿಂದ ಸ್ಥಾಪನೆ. == ಜನನ == ೧೭೬೧ - ಮದಾಮ್ ತುಸ್ಸಾದ್ಸ್ ಮೇಣ ಶಿಲ್ಪ ಸಂಗ್ರಹಾಲಯದ ಸ್ಥಾಪಕಿ ಮೇರಿ ತುಸ್ಸಾದ್. ೧೮೯೪ - ಭೀಮ್ ಸೇನ್ ಸಾಚಾರ್, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪಂಜಾಬ್ ರಾಜ್ಯದ ಮಾಜಿ ಮುಖ್ಯಮಂತ್ರಿ. ೧೯೨೩ - ವ್ಯಾಸರಾಯ ಬಲ್ಲಾಳ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿ. ೧೯೪೯ - ಪಾಬ್ಲೊ ಎಸ್ಕೊಬಾರ್, ಕೊಲಂಬಿಯದ ಮಾದಕ ಪದಾರ್ಥಗಳ ಮಾರಾಟಗಾರ. ೧೯೬೩ - ಅರ್ಜುನ ರಣತುಂಗ, ಶ್ರೀ ಲಂಕಾದ ಕ್ರಿಕೆಟ್ ಆಟಗಾರ. ೧೯೬೩ = ಅಹಲ್ಯ ಬಲ್ಲಾಳ್. ಮುಂಬಯಿ ಕನ್ನಡ ರಂಗಭೂಮಿಯ ಶ್ರೇಷ್ಠ ಅಭಿನೇತ್ರಿ == ಮರಣ == ೧೧೩೫ - ಇಂಗ್ಲೆಂಡ್ನ ಮೊದಲನೇ ಹೆನ್ರಿ. ೧೮೬೬ - ಜಾರ್ಜ್ ಎವರೆಸ್ಟ್, ವೇಲ್ಸ್ನ ಸಮೀಕ್ಷಕ ಮತ್ತು ಮೌಂಟ್ ಎವರೆಸ್ಟ್ ಪರ್ವತದ ಹೆಸರಿನ ಮೂಲ. ೧೯೪೭ - ಜಿ.ಎಚ್. ಹಾರ್ಡಿ, ಇಂಗ್ಲೆಂಡ್ನ ಗಣಿತಜ್ಞ. ೧೯೬೪ - ಜೆ.ಬಿ.ಎಸ್. ಹಾಲ್ಡೇನ್, ಸ್ಕಾಟ್ಲೆಂಡ್ನ ಜೀವಶಾಸ್ತ್ರ ತಜ್ಞ. == ದಿನಾಚರಣೆಗಳು == ವಿಶ್ವ ಏಡ್ಸ್ ದಿನ. ರೊಮೇನಿಯದ ರಾಷ್ಟ್ರೀಯ ದಿನ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ